Photo courtesy:G.R Pandit
ಘನ ವಿಹೀನ ಮೋಹಕ ಬಣ್ಣ
ತೆರೆದಿದೆ ವಿಸ್ಮಯ ಲೋಕದ ಕಣ್ಣ
ಅಂತರ್ಬಹಿರಂಗದ ಮಾಯಾ ಛೇದ
ಮುಗ್ಧ ಮನಕರಿವಾಗದ ಭೇದ
ನೀಲಂಕುರದ ಕಲ್ಪನೆಯ ಛಾಯೆಯೋ
ನೀರುಂಗುರದ ಕವಿತೆಯ ಲಯವೋ
ಅರಿವಿನಾಚೆಯ ಭ್ರಮಾ ಸತ್ಯವೋ
ದೃಢ ವಾಸ್ತವ್ಯದ ನಾಮಾ ಮಿತ್ಯವೋ
ಸಾಧಕ ಭಾಧಕದರಿವಿಲ್ಲದ ಜರಡಿ
ಮಾಧಕ ಭಾವನಾ ಬದ್ಧವಲ್ಲದ ಕನ್ನಡಿ
ಮನ ಬಿಚ್ಚಿ ಸ್ವಚಂದದ ಗರಿಬಿಚ್ಚಿ ಏಣೆಯಿಲ್ಲದೆ ಹರಡಲಿ ನಗು
ಚಿಂತನ ಮಂತನಕ್ಕೂ ನಿಲುಕದ ಸ್ವರ್ಗಾನಂದ ನಿನ್ನದಾಗಲಿ ಮಗು
1 comment:
well captured emotions, may be some editing /typos
Post a Comment