
ಮರಳು ಗಾಡಿನ ಮಂಪರು
ಮಸುಗಟ್ಟಿದ ಮನಸ್ಸು
ಮರೆಮಾಚಿದ ಮರೀಚಿಕೆಯೇ ದ್ವಿಮುಖ.
ಮೌನ ಆಕ್ರಂದನ
ಅಸ್ಪರ್ಶೀಯ ಬಿಸುಗಟ್ಟಿದ ಹಾದಿ
ಮರಗಟ್ಟಿದ ತೊಳಲಾಟ ,ಹಿಂದೆ ತಿರುಗಿ ನೋಡಲಾರದ ಹಿನ್ನೋಟ .
ಸತ್ಯ ,ಮಿಥ್ಯಗಳ ನಿರಂತರ ಹೋರಾಟ
ಸಾವು ,ಬದುಕಿನ ನಿಗೂಢ ದರ್ಪಣ
ನಿಲುಕದ ಉತ್ತರಗಳಿಗೆ ಸತತ ಕಾದಾಟ
ಅರಿಯದ ಕಂಬನಿಗಳ ಅನಾಮಿಕ ನೋಟ
ವಾಸ್ತವ ಅಸ್ತಿತ್ವಕ್ಕೆ ಸಿಗದ ಕಡುದಾರಿ
ಸುಡುಬೆಂಕಿಯ ಕೆಂಸುಳಿಯ ಸಾವಿರ ಪ್ರಶ್ನೆಗಳು
ಮಾತು , ಮೌನಗಳ ವಿಕೃತ ಸಲ್ಲಾಪ
ಯಡಬಿಡದೆ ಹರಿದಿದೆ ಬಿಗುಮಾನದ ಬಿಸಿಲು
ಎಟುಕದ ಆಕಾಂಕ್ಷೆಗಳ ಪರಿಪೂರ್ಣ ಚಿತ್ರಣ ದ್ವಿಮುಖ
ನೋವು ,ನಲಿವಿನ ಅರಿಯದ ಪ್ರಶ್ನೆಗಳ ಉಸಿರಿಲ್ಲದ ಉತ್ತರ ದ್ವಿಮುಖ
ಅಸ್ಪಷ್ಟ ಆಯಾಮದಲ್ಲಿ ದೈತ್ಯ ಮಾನವಿ ಮುಖವಾಡ ದರಿಸಿ
ವಿರಾಜಿಸುವ ನಿರಂತರ ನಾಟಕ ದ್ವಿಮುಖ .
No comments:
Post a Comment