Friday, May 13, 2011

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ........


ಮುಸ್ಸಂಜೆ ಹೊತ್ತು .ಒಂದಷ್ಟು relax ಮಾಡುವ ಮನಸ್ಸು.ಮನೆಯ ಮುಂಬಾಗದಲ್ಲಿ ಕಾಲುಚಾಚಿ ಕುಳಿತು ರಸ್ತೆಯಲ್ಲಿ ಸಾಗುತಿದ್ದ ಜನರನ್ನು ವೀಕ್ಷಿಸುತಿತ್ತು ಕಣ್ಣುಗಳು.
ತಟ್ಟನೆ ಒಂದು ಕಪ್ಪು ನಾಯಿ ರಸ್ತೆಯಲ್ಲಿ ಓಡಾಡುವುದನ್ನು ನೋಡುತಿದ್ದಂತೆಯೇ ಮನಸ್ಸಿನ ಯಾವುದೊ ಮೂಲೆಯಿಂದ ಹಟತ್ತನೆ ಮೂಡಿಬಂದ ಪದ "Tommy"!!.
ಅಷ್ಟು ಹೊತ್ತಿಗಾಗಲೇ ಬಾಲ್ಯದ ಒಂದು ಸವಿನೆನಪಿನತ್ತ ಮನಸ್ಸು ಪಯಣ ಬೆಳಸಿತ್ತು.

ನನಗೆ ಸುಮಾರು 4 ರಿಂದ 5 ವರ್ಷ.ಬಾಲ್ಯದ ಮುಗ್ದತೆ ನೋಡಿದ ಯಲ್ಲಾ ವಸ್ತುಗಳಲ್ಲೂ ಒಂದು ರೀತಿಯ ಕುತೂಹಲ ಹುಟ್ಟಿಸುತಿದ್ದ ವಯಸ್ಸು. ಪ್ರಾಣಿ ಪಕ್ಷಿಗಳು ,ಅಪ್ಪನ violin ನಿಂದ ಮುಡಿಬರುತಿದ್ದ ನಿನಾದ ,ಅಮ್ಮ ಹೇಳುತಿದ್ದ 'fairy tales', ಮನೆಯ ಕೊಣೆಕೊಣೆಗಳಲ್ಲಿ ಸಿಗುತಿದ್ದ ನನ್ನ ಆಟಿಕೆಗಳು ,ನೀಲಾಕಾಶದ ಮುದ್ದು ಚಂದಮಾಮ ಎಲ್ಲವೂ ನನ್ನ ಪುಟ್ಟ ಜಗತ್ತಿನ ಅಮೂಲ್ಯ ವಸ್ತುಗಳು.

ಅದೇನೋ ಗೊತ್ತಿಲ್ಲ ಚಿಕ್ಕಂದಿನಿಂದಲೂ ಪ್ರಾಣಿಗಳ ಬಗೆಗೆ ತೀವ್ರ ಪ್ರೀತಿ ನನಗೆ. ಮನೆಯಲ್ಲಿದ್ದ ಅಕ್ಕಿ ಕಾಳುಗಳನ್ನು ಗುಬ್ಬಿಗಳಿಗೆ ಹಾಕಿ ,ಅವುಗಳ ಚೀಕ್ ಚೀಕ್ ಶಬ್ದ ಮನೆಯನ್ನು ಆವರಿಸಿದಾಗ ಒಂದು ರೀತಿಯ ಉತ್ಸಾಹ.ಮನೆಯ ಹಿಂದಿನ ಹಿತ್ತಿಲು, ಅಮ್ಮನ ಕೈದೋಟ ಯಾವಾಗಲೂ ನನ್ನನ್ನು ತನ್ನತ್ತ ಕೈಸೆಳೆದು ಕರೆಯುತಿತ್ತು.

ಅದೊಂದು ದಿನ ಬೆಳಗಿನ ಹೊತ್ತು. ಸಕ್ಕರೆ,ತುಪ್ಪ ಸವರಿದ ರೊಟ್ಟಿಯ roll ಮಾಡಿಕೊತ್ತಿದ್ಲು ಅಮ್ಮ.ಅದನ್ನ ಸವಿಯುತ್ತ ಎಂದಿನಂತೆ ಹಿತ್ತಿಲಲ್ಲಿ ಓಡಾಡುತ್ತಿರುವಾಗ ,ಏನೋ ನನ್ನ ಕಾಲುಗಳ ಸುತ್ತ ಹರಿದಾಡಿದ ಅನುಭವ .ಕಣ್ಣುಗಳು ಅಹೊತ್ತಿಗೆ ಸೆರೆಹಿಡಿದಿದ್ದ ವಿಸ್ಮಯ ಚಿತ್ರಣ ಒಂದು ಪುಟ್ಟ ಮುದ್ದಾದ ನಾಯಿಮರಿ. ಅದರ ವಿಶಾಲ ಮಿಂಚಿನ ಕಣ್ಣುಗಳು ,ನೀಳವಾದ ಕಿವಿಗಳು,ತಳ ತಳನೆ ಹೊಳೆಯುತಿದ್ದ ಕಪ್ಪು ಬಣ್ಣದ ನಾಯಿಮರಿ ನನ್ನನ್ನು ಆಕರ್ಷಿಸಿಬಿಟಿತ್ತು.ನನ್ನ ಕೈಯಲ್ಲಿದ್ದ ಅರ್ಧ ರೊಟ್ಟಿಯನ್ನು ಅದಕ್ಕೆ ಕೊಟ್ಟು ,ಹೇಳಲಾರದ ಖುಷಿಯಲ್ಲಿ ತೇಲುತಿದ್ದೆ ನಾನು.ಬಾಲ್ಯವೇ ಹಾಗೆ ಸಣ್ಣ ಸಣ್ಣ ವಸ್ತುಗಳಲ್ಲೂ ,ವಿಷಯಗಳಲ್ಲೂ ಮನಸ್ಸು ಸಂತೋಷವನ್ನು ಪಡೆಯುವ ಒಂದು ವಿಸ್ಮಯ ಅನುಭೂತಿ. ಅಮ್ಮ 'ಪಾಪು ಒಳಗೆ ಬಾ' ಅಂತ ಕರೆದಿದ್ದಳು.ಇಷ್ಟಇಲ್ಲದಿದ್ದರೂ ಹೋಗಬೇಕಾಯ್ತು.

ಮಾರನೆ
ದಿನ ಮತ್ತೆ ಅದೇ ಸಮಯಕ್ಕೆ ನನ್ನ ಪುಟ್ಟ ಕಾಲುಗಳು ಅದೇ ಜಾಗದತ್ತ ತಿರುಗುತಿದ್ದವು,ಕಣ್ಣುಗಳು ಹುಡುಕುತ್ತಿತ್ತು ಎಲ್ಲಿ ನಾಯಿಮರಿ ಅಂತ.... ಕ್ಷಣಕ್ಕೆ ಮತ್ತೆ ಪುಟ್ಟ ಮರಿಯನ್ನ ನೋಡುತ್ತಿದ್ದಂತೆಯೇ ಅವರ್ಣನೀಯ ಆನಂದ.
ಅನಾಮದೇಯ ಮರಿ ' Tommy' ಆಗಿ ನನ್ನ ಬಾಲ್ಯದ ಅವಿಸ್ಮರಣೀಯ ಗೆಳೆಯನಾಗಿ ನನ್ನ ಪುಟ್ಟ 'fantasy' ಸಾಮ್ರಾಜ್ಯಕ್ಕೆ ಸೇರಿಹೋಗಿದ್ದ.ಅಂದಿನಿಂದ ಪ್ರತಿದಿನವೂ ಬೆಳಗ್ಗೆ,ಮಧ್ಯಾಹ್ನ ,ರಾತ್ರಿ ನನ್ನ ಆಹಾರದ ಅರ್ಧ 'Tommy' ಗೇ ಮೀಸಲಾಗಿಬಿಟ್ಟಿತ್ತು.


ನಾನು
ತುಂಬಾ lucky.ನನ್ನ ಅಪ್ಪ ,ಅಮ್ಮನಿಂದಲೇ ಹೊರಜಗತ್ತಿನೊಂದಿಗೆ ಪ್ರೀತಿಪರಿಭಾಷೆಯಲ್ಲಿ ಸ್ಪಂಧಿಸುವುದನ್ನು ಕಲಿತಿದ್ದೆ .ಅವರು ನನಗೆ ತಪ್ಪಲ್ಲದ ಯಾವುದೇ ವಿಷಯಕ್ಕೂ restrict ಮಾಡುತ್ತಿರಲಿಲ್ಲ. ನನ್ನ ಮತ್ತು 'Tommy' ಮಧುರ ಬಾಂಧವ್ಯ ನೋಡಿ ಬಾಗಿಲು ಹತ್ತಿರ ನಿಂತು ಮುಗುಳು ನಗುತ್ತಿದದ್ದನ್ನ ನಾನು ತಿಳಿದಿದ್ದೆ. ಆಮೇಲೆ ಅಮ್ಮ Tommy ಗೆ ಅರ್ಧ ಯಾಕೆ ಅಂತ ಅದಕ್ಕೆ ಪ್ರತ್ಯೇಕವಾಗಿಯೇ ತಿಂಡಿ ಕೊಡುತಿದ್ಲು ನಂಗೆ.
ನೋಡುತಿದ್ದಂತೆಯೇ
ಸುಮಾರು ಒಂದು ವರ್ಷ ಕಳೆದಿತ್ತು.ಪುಟ್ಟ Tommy ಮರಿ ಈಗ handsome boy ಆಗಿದ್ದ:).......

ಕಾರಣಾಂತರಗಳಿಂದ ನಾವು ಮನೆಯನ್ನು ಬಿಟ್ಟು ಬೇರೆ ಮನೆಗೆ ಹೋಗಬೇಕಾಗಿ ಬಂತು. ಹೊಸ ಮನೆ ಈಗಿದ್ದ ಮನೆಯಿಂದ ಸುಮಾರು ಒಂದು km ದೂರವಿತ್ತು . ಅದೊಂದು ದಿನ ನನಗೆ Tommy ಗೆ ತಿಂಡಿ ಕೊಡೋದು ಮರತೇ ಹೋಗಿತ್ತು .ಅಪ್ಪನ ಜೊತೆ ಹೊಸ ಮನೆ ನೋಡಲು ಹೋಗಿಬಿಟ್ಟಿದ್ದೆ .............
ಹೊಸ ಮನೆಯ gate ಹತ್ತಿರ ವಾಪಾಸು ಬರುವಷ್ಟರಲ್ಲಿ ಒಂದು ಆಶ್ಚರ್ಯ ಕಾದಿತ್ತು. ಅದೇ ಮಿಂಚು ನೋಟದ Tommy ಹೊರಗಡೆ ನನ್ನನ್ನು ಹುಡುಕುತಿತ್ತು.ಅದೊಂದು ಅದ್ಭುತ !!..ಅದೆಂಥ ಸ್ಪರ್ಶ ಜ್ಞಾನದಿಂದ ಅದು ಒಂದು km ದೂರ ನಾವಿರುವ ಸರಿಯಾದ ಸ್ತಳಕ್ಕೆಬಂದು ತಲುಪಿತ್ತು amazing!!!...

ಮನುಷ್ಯನ ಮನಸ್ಸು ಹೊಸತನಕ್ಕೆ ತುಡಿಯುವುದು ಸಹಜ. ಆದರೆ ಹೊಸತನದ ಹುಡುಕಾಟದಲ್ಲಿ ಹಳೆಯ ಅದೆಷ್ಟೋ ಅನರ್ಘ್ಯ ಗಳನ್ನ ಮರೆತು ಹೋಗುವುದು ದುರಂತ. ಒಂದು ವಾರದ ಹತ್ತಿರ ನಾಯಿ ನನ್ನನ್ನು ಹುಡುಕಿಕೊಂಡು ಪ್ರತಿನಿತ್ಯವೂ ಒಂದು km ಪ್ರಯಾಣ ಬೆಳಸಿ ನಮ್ಮ ಹೊಸ ಮನೆಯತ್ತ ಬರುತಿತ್ತು. ಆದರೆ ಅದ್ಯಾವುದೋ ಒಂದು ಹೊಸತಾದ ಜಗತ್ತು ನನ್ನನ್ನು ಅಕ್ರಮಿಸಿಬಿಟ್ಟಿತ್ತು. ಹೊತ್ತಿಗೆ ಅದು it's not of so important ಅನ್ನಿಸಿತ್ತು ...ಅರಿವಾಗುವ ಮುನ್ನ ನಾನು ನನ್ನ ಹಳೆಯ ಗೆಳೆಯನನ್ನ ಯಲ್ಲೋ ignore ಮಾಡಿಬಿಟ್ಟಿದ್ದೆ......

ಹೊಸತನದ ಸೆಲೆಯಿಂದ ಬಿಡಿಸಿಕೊಂಡ ನನ್ನ ಪುಟ್ಟ ಹೃದಯ ಮತ್ತೆ ಹುಡುಕಲಾರಂಭಿಸಿತ್ತು Tommy ಯನ್ನ. ಅಪ್ಪನ ಜೊತೆ ಹಳೆ ಮನೆಯ ರಸ್ತೆಯ ಗಲ್ಲಿಗಳಲ್ಲಿ ಹುಡುಕಿದರೂ Tommy ಮತ್ತೆ ಸಿಗಲೇ ಇಲ್ಲ ......


ಜೀವನ ಯಾವಾಗಲು ಒಂದು ವಿಚಿತ್ರ illusion ಹಿಂದೆ ಓಡುತ್ತದೆ...ಕನಸುಗಳು ಮನುಷ್ಯನ ಚೈತನ್ಯವನ್ನು ಪುಷ್ಟಿಗೊಳಿಸುವುದು ನಿಜ.ಆದರೆ ಅದೆಷ್ಟೋ ಬಾರಿ ಕನಸುಗಳು ವಾಸ್ತವವನ್ನು ಬಿಟ್ಟು ಕೈಗೆ ಸಿಗದ ಮರೀಚಿಕೆಯ ಬೆನ್ನುಹತ್ತಿ ಓಡುತ್ತಿರುತ್ತದೆ.even a millionaire wants to be a billionaire!!...
ಸಾಕಾಗುವಷ್ಟು ಓಡಿ ಯಲ್ಲವನ್ನೂ ಪಡೆದರೂ ಮನಸ್ಸು ಒಂದು ಹಂತದಲ್ಲಿ ಹಳೆಯ ಮಾಸಿದ ದರ್ಪಣ ಹಿಡಿದು ನಿರಂತರ ಓಟದಲ್ಲಿ ಕಳೆದುಕೊಂಡ ಅದೆಷ್ಟೋ ಹಳೆಯ ಅಪೂರ್ವ ವಸ್ತುಗಲಳನ್ನ ,ವ್ಯಕ್ತಿಗಳನ್ನ , ನೆನಪು
ಗಳನ್ನ ಸೂಕ್ಷ್ಮ ಸಂವೇದನೆಯ ಬಾಗಿಲು ತೆರೆದು ಪ್ರತಿಬಿಂಬಿಸಿದಾಗ ಒಂದು ಕ್ಷಣಕ್ಕೆ ' something missing!' ಅನ್ನಿಸುವಷ್ಟರಲ್ಲಿ ಜೀವನದ ಪಥ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಪ್ರಯಾಣ ಬೆಳಸುತ್ತದೆ...

ಈಗಲೂ ನನ್ನ ಬಾಲ್ಯದ ಸವಿನೆನಪಿನ ಪುಟಗಳಲ್ಲಿ ನಾನು ಕಳೆದುಕೊಂಡ ,ಮತ್ತೆ ತಿರುಗಿ ಪಡೆಯಲಾರದ ಅವಿಸ್ಮರಣೀಯ ಸುಂದರ ಕವನ 'Tommy'.ಇವತ್ತಿಗೂ ಯಾವುದೇ ನಾಯಿಮರಿಯನ್ನ ನೋಡಿದಾಗ ನನ್ನ ಮನಸ್ಸಿಗೆ ಮೂಡಿಬರುವ ಪ್ರಥಮ ಚಿತ್ರಣ Tommy...
ಜೀವನದ ವಿಚಿತ್ರ ಹೊಸತನ್ನು ಅರಸುವ ತವಕದಲ್ಲಿ ,ಒಂದು ಹಂತಕ್ಕೆ ತಿರುಗಿ ನೋಡುವಷ್ಟರಲ್ಲಿ ,ಅವೆಷ್ಟೋ ಅಮುಲ್ಯವಾದವುಗಳು ನಮಗೆ ವಿಧಾಯ ಹೇಳಿರುತ್ತವೆ.ಸೂರ್ಯ ದಿನದ ಅಸ್ತಂಗತಕ್ಕೆ ಸಿದ್ಧನಾಗುತಿದ್ದಂತೆಯೇ ಬಾಲ್ಯದ ನೆನಪುಗಳು ಗೋಪಾಲಕೃಷ್ಣ ಅಡಿಗರ ಕವಿತೆಯ 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ'
ಸಾಲುಗಳು ಬದುಕಿನ ವಾಸ್ತವಕ್ಕೆ ಯಷ್ಟು ಹತ್ತಿರ ಅನ್ನಿಸಿತ್ತು....

The greatest tragedy lies, while in satisfying all fantasy dreams ,searching for unrealistic happiness , ignoring all those things which once cherished our life before,finally ending up where even if we want we cannot get them back again....
6 comments:

Bhargavi Bhat said...

it's Awesome :).. loved the last three lines :)

Bindumalini said...

thanks a lot dear...that's what I ultimately felt by my own experiences....

sanki said...

still u hv time..buy one more puppy ;-)

Bindumalini Vaidyakar said...

:sanketh there are some things in life which cannot be replaced....

KT THE WILD said...

Awesome...... i loved it.

mahi said...

ತುಂಬಾ ಚನ್ನಾಗಿ ಬರೆದಿದ್ದೀರ., ಕಳೆದು ಹೋದ ಬಾಲ್ಯದ ದಿನಗಳನ್ನು ಮತ್ತೆ ಮನಸ್ಸಿನ ಪಲ್ಲಟದ ಮೇಲೆ ತಂದಿರಿ..